ನಿನ್ನ ಮುಗಿಲ ಸಾಲೆ ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯಾಜಡಿಮಳೆಗೆ ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ ತಿಳಿಯದಾಗಿದೆ. //ಪಲ್ಲವಿ//
ಭುವಿ ಕೆನ್ನೆ ತುಂಬಾ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬಾ ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯಾ ಸವಿ ಸದ್ದು ಪ್ರೇಮನಾದವೋ......
ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನಬಿಲ್ಲು ಏನೋ ಮೋಡಿಯೋ......// //
ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ?
ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ ?
ಯಾರ ಉಸಿರಲ್ಲ್ಯಾರ ಹೆಸರೋ ಯಾರು ಬರೆದರೂ...... ?
ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೋ?
ಯಾರ ಪ್ರೇಮ ಪೂಜೆಗೆ ಮುಡಿಪೋ ಯಾರು ಬಲ್ಲರೋ.......// //
ಒಲವ ಚಂದಮಾಮ ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ ........
ಪ್ರಣಯದೂರಿನಲ್ಲಿ ಕಳೆದುಹೊಗೋ ಸುಖವ ಇಂದು
ಧನ್ನ್ಯನಾದೆ ಪಡೆದುಕೊಂಡು ಹೊಸ ಜನ್ಮವೋ................// //
ಯೋಗರಾಜ್ ಭಟ್
ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು
ಮಾಯದಾ ಲೋಕದಿಂದ ನನಗಾಗಿ ಬಂದವಳೆಂದು
ಆಹಾ ಎಂಥ ಮಧುರ ಯಾತನೆ......
ಕೊಲ್ಲು ಹುಡುಗಿ ಒಮ್ಮೆ ನನ್ನ.......ಹಾಗೆ ಸುಮ್ಮನೆ.........//ಪಲ್ಲವಿ//
ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ
ಇನ್ನು ಯಾರ ಕನಸಲೋ ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ....
ನಾ ಖೈದಿ ನೀನೆ ಸೆರೆಮನೆ.................
ತಪ್ಪಿ ನನ್ನ ಅಪ್ಪಿಕೋ ಒಮ್ಮೆ.............
ಹಾಗೆ ಸುಮ್ಮನೇ.........................
ಅನಿಸುತಿದೆ ಯಾಕೋ ಇಂದೂ.......................// //
ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ ಕೇವಲ ನಿನ್ನದೇ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ...
ನಿನಗುಂಟೆ ಅದರ ಕಲ್ಪನೆ....
ನನ್ನ ಹೆಸರ ಕೂಗೆ ಒಮ್ಮೆ.............
ಹಾಗೆ ಸುಮ್ಮನೆ................
ಅನಿಸುತಿದೆ ಯಾಕೋ ಇಂದು............................// //
ಜಯಂತ ಕಾಯ್ಕಿಣಿ
ಕಿವಿ ಮಾತೊಂದು ಹೇಳಲೇ ನಾನಿಂದು ದಾರಿ ನಿಂತಾಗ ಸಾಗಲೇ ಬೀಕಿಂದು
ನಿನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ ನೀನು ನೀನಾಗಿ ಬಾಳಲೇಬೇಕಿಂದು
ಹಸಿರಾಗಿದೆ ದೀಪವು ನಿನಗಾಗಿ, ನಸುನಗುತಲೇ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ ಈ ಬಾಳುಂಟು ಬಾಳುವ ಸಲುವಾಗಿ // ಪಲ್ಲವಿ//
ಬಾಗಿಲಿನಾಚೆಗೆ ತಾಬಂದು ಕೂಗಿದೆ ಬಾಳು ಬಾಯೆಂದು
ಸಂತಸದಿಂದ ಓ ಎಂದು ಓದಲೇಬೇಕು ನೀನಿಂದು
ಸಾವಿರ ಕಣ್ಣಿನ ನವಿಲಾಗಿ ನಿಂತಿದೆ ಸಮಯ ನಿನಗಿಂದೂ
kannanu ತೆರೆದು ಹಗುರಾಗಿ ನೋಡಲೇ ಬೇಕು ನೀ ಬಂದು // //
ಬೆಳ್ಳಿಯ ಅಂಚಿನ ಈ ಮೋಡ ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ ಹಾಡಲೇ ಬೇಕು ನೀನಿಲ್ಲಿ
ಮಿಂಚುವ ಅಲೆಗಳ ನದಿಯಾಗಿ ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ ಆಡಲೇ ಬೇಕು ನೀನೀಗ // //
ಜಯಂತ ಕಾಯ್ಕಿಣಿ
ಏನಾಗಲಿ ಮುಂದೆ ಸಾಗು ನೀ , ಬಯಸಿದ್ದೆಲ್ಲ ಸಿಗದು ಬಾಳಲಿ // ಪಲ್ಲವಿ //
ಚಲಿಸುವ ಕಾಲವು ಕಳಿಸುವ ಪಾಠವ ಮರೆಯಬೇಡ ನೀ ತುಂಬಿಕೋ ಮನದಲಿ
ಇಂದಿಗೂ ನಾಳೆಗೂ ಮುಂದಿನ ಬಾಲಲಿ ಗೆಲ್ಲುವಂಥ ಸ್ಪೂರ್ತಿ ದಾರಿದೀಪ
ನಮಗೆ ಆ ಅನುಭವ ...
ಕರುಣೆಗೆ ಬೆಲೆಯಿದೆ ಪುನ್ನ್ಯಾಕೆ ಫಲವಿದೆ /
ದಯವ ತೂರುವ ಮಣ್ಣಿನ ಗುಣವಿದೆ//
ಸಾವಿನ ಸುಳಿಯಲಿ ಸಿಲುಕಿದ ಜೀವಕೆ /
ಜೀವ ನೀಡುವ ಹೃದಯವೇ ದ್ಯವವು//
ಹರಸಿದ ಕೈಗಳು ನಮ್ಮನು ಹರಸುತ ವಿಧಿಯ ಬರಹವಾಗಿ ಮೌನದಲ್ಲೇ ನಮ್ಮನು ಕಾಯುತ
ಪ್ರತಿಫಲ ಬಯಸದೆ ತೋರಿದ ಕರುಣೆಯು ಮೊದಲು ಮನುಜನೆಂಬ ಸಾರ್ಥಕತೆಯ ನೆಮ್ಮದಿ ತರುವದು.....
ಜಯಂತ್ ಕಾಯ್ಕಿಣಿ
ಸಂಜೀವ ಕುಮಾರ ಸಿರನೂರಕರ
sanjeev kumar sirnoorkar