ಗುರುವಾರ, ಆಗಸ್ಟ್ 28, 2008

ಧರ್ಮ ಪ್ರವಾಸ ಮತ್ತು ದಾಸ ಸಾಹಿತ್ಯ

ಧರ್ಮ ಪ್ರವಾಸ ಮತ್ತು ದಾಸಸಹಿತ್ತ್ಯ



ವೇದಭೂಮಿ, ದೇವಭೂಮಿ, ಕರ್ಮಭೂಮಿ, ಪುನ್ನ್ಯಭೂಮಿ ಎಂದು ಕರೆಸಿಕೊಳ್ಳುವ ಭಾರತ ದೇಶದಲ್ಲಿ ಹುಟ್ಟುವದೆ ಜನ್ಮ ಜನ್ಮಾದಿಗಳ ಪುನ್ಣ್ಯ ಫಲ.ಭಾರತ ಸಾಂಸ್ಕೃತಿಕ ದೇಶ ಧರ್ಮ ಇದರ ಆತ್ಮ ಇಲ್ಲಿನ ಜನರು ಧರ್ಮವನ್ನೆಎ ತಮ್ಮ ಜೇವ್ಫ್ಕ್ನದ ತಳಹದಿಯನ್ನಾಗಿಸಿಕೊಂಡು ಜೀವನ ಸಾಗಿಸುತ್ತಾರೆ. ಸಹಸ್ರಾರು ಋಷಿಮುನಿಗಳು ಮಹಾನ್ ವಿಭೂತಿ ಪುರುಷರು ತಮ್ಮ ಪರಿಶುದ್ಧ ಜೀವನ ಹಾಗೂ ತಪಶ್ಚರ್ಯಗಳಿಂದ ಈ ಭೂಮಿಯನ್ನು ಪವಿತ್ರಗೊಲಿಸಿದ್ದಾರೆ . ಭರತಭೂಮಿ ಜ್ಞಾನದ ಸಿರಿಧರೆ ಧರ್ಮದ ನೆಲೆವೀಡು ಧರ್ಮವೇ ನಮ್ಮ ಜೀವನದ ಉಸಿರು ಎಂದು ತಿಳಿದು ಅದರೊಂದಿಗೆ ಅರ್ಥ,ಕಾಮ,ಮೋಕ್ಷ ಎಂಬ ಪುರುಷಾರ್ಥಗಳನ್ನು ಸೂಚಿಸಿ ಅದರ ಮುಖಾಂತರ ಜೀವನ ಸಾಗಿಸುವಂತೆ ಹೇಳಿ ನಮ್ಮ ಪೂರ್ವಜರು ಅಪೂರ್ವವಾದ ಪರಂಪರೆಯನ್ನು ಬಿಟ್ಟುಹೋಗಿದ್ದರೆ ಸಹಸ್ರಾರು ಋಷಿಮುನಿಗಳು ಶರಣರು ದಾಸರು ಸಂತರು ಎಲ್ಲರೂ ಸಹ ಈ ತತ್ವದ ತಳಹದಿಯ ಹಿನ್ನಲೆಯಲ್ಲಿಯೀ ಧರ್ಮ ಪ್ರಸಾರವನ್ನು ಮಾಡಿದರು.



ಧರ್ಮದ ಲಕ್ಷಣಗಳನ್ನು ಕುರಿತು ಈ ಶ್ಲೋಕದಲ್ಲಿ ನೋಡಬಹುದು.....



ದೃತಿ ಕ್ಷಮಾ ದಮ ಆಸ್ತೀಯಂ



ಶೌಚಂ ಇಂದ್ರಿಯ ನಿಗ್ರಹಂ



ಧೀ ವಿದ್ಯಾ ಸತ್ಯಮ್ ಅಕ್ರೋಧ



ದಶಕಂ ಧರ್ಮ ಲಕ್ಷಣಂ

ಧರ್ಮ ಎಂದರೇನು? ಎಂಬ ಪ್ರಶ್ನೆಯ ಹುಡುಕಾಟವೇ ಮನುಕುಲದ ಕಥೆ.



ಕಥೆ. ಕಳೆದ ೧೦ ಸಾವಿರ ವರ್ಷಗಳಿಂದ ಧರ್ಮಕ್ಕೆ ಹೊಸ ಹೊಸ ವ್ಯಾಖ್ಯಾನಗಳನ್ನು ಸಿದ್ಧಾಂತ ಪ್ರಸ್ಥಾನಗಳನ್ನು ಟೀಕೆ ಟಿಪ್ಪಣಿಗಳನ್ನು ಬರೆದು ಪ್ರಸ್ತುತೀಕರಿಸಿದ್ದರೆ.

ಒಟ್ಟಿನಲ್ಲಿ dharayati iti dharma ಎಂಬ vaakyavannu ನಾವೆಲ್ಲ keeliddeve. ಕೆಳಗೆ biddavarannu meelettuvudee ಧರ್ಮ ಎಂಬ ಕನ್ನಡದ arthavoo keeliddeve.



iiga nanna chintaneyendare ಕೆಳಗೆ biddavaru ಯಾರು?yavaga? ಎಷ್ಟು?ಹೇಗೆ? ಎಂಬುದು ಅಲ್ಲ ಏಕೆಂದರೆ ಇದರ goojige hoodare ಉತ್ತರ vyajjya . saahasii manobhavada yavude vyaktiyu ಇದೆ ವಿಷಯವನ್ನು ಹೀಗೆ chintisuttane ಕೆಳಗೆ biddavanannu melakke ettuvadu dharmavaadare meelakkettabekadavanalli irabekada guna sheela swabhavagalu entahavu? ಅವು ಎಲ್ಲಿಂದ baruttave? ennuvude ಧರ್ಮದ nele.

ಈಗ ಸ್ವಲ್ಪ ವಿವರವಾಗಿ ಹೇಳುವದಾದರೆ ಸಮಯಪ್ರಜ್ಞೆ,ವ್ಯವಹಾರ ಕೌಶಲ್ಯ,ಸಂಹತನ ಚತುರತೆ ಸ್ನೇಹಪರ ಮನೋಭಾವ ಸ್ವಾಮಿನಿಷ್ಠೆ ಸತ್ಯಸಂಧತೆ ಪರೋಪಕಾರ ಮನೋಭಾವ ಪರನಾರಿ ಸಹೋದರತ್ವ ಮೊದಲಾದ ಗುಣಗಳೇ ಧರ್ಮದಆಧುನಿಕ ವ್ಯಾಖ್ಯಾನಗಳು. ವ್ಯಕ್ತಿ ಕುಳಿತಲ್ಲೇ ಕುಳಿತರೆ ಪರಾವಲಂಬಿಯೂ,ಹಾಗು ಪ್ರೆರನರಹಿತನೂ ಆಗುತ್ತಾನೆ.ಹಾಗಾಗಿ ಅವನು ಸಮಾಜಜೀವಿಯಾಗಿ ಸಂಘಜೀವಿಯಾಗಿ ಜೊತೆಗೆ ಪ್ರವಾಸಪ್ರಿಯನಾಗಿ ದೇಶ ಸುತ್ತಿ ನೋಡಿ ತನು ಓದಿದ ಕೋಶಗಳಿಗೆ ಅವುಗಳನ್ನು ಅನ್ವಯಿಸಿ ತನ್ಮೂಲಕ ಸೃಷ್ಟಿಕಾರ್ಯದಲ್ಲಿ ತೊಡಗಿದರೆ ಅವನ ಅಧ್ಯಯನ ಹಾಗು ಅನುಭವದ ಮೂಸೆಯಿಂದ ಬಂದ ಸಾಹಿತ್ಯವೇ ಪ್ರವಾಸ ಸಾಹಿತ್ಯವಗುತ್ತದೆ.ಇದನ್ನೇ ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂದು ಹೇಳಿದರು.

ವ್ಯಕ್ತಿಯ ಚತುರ್ವಿಧ ಪುರುಶಾರ್ಥಗಳೆಂದರೆ ಧರ್ಮಮಾರ್ಗದಿಂದ ಅರ್ಥಸಂಪಾದನೆ ಮಾಡಿ ವಿದಿತ ಕರ್ಮದಲ್ಲಿ ಕಾಮೂಪಭೂಗಮಾಡಿದರೆ ಮೋಕ್ಷ ಲಭಿಸುತ್ತದೆ. ಈ ಕೂಷ್ಟಕಗಳಲ್ಲಿ ಏರುಪೇರಾದರೆ ನರಕ ತಪ್ಪಿದ್ದಲ್ಲ. ಇದನ್ನು ಶಾಸ್ತ್ರೋಕ್ತವಾಗಿ ಪಾಲಿಸಲೆಂದೇ ಹಳ್ಳಿ ಮುಟ್ಟಿದರೆ ಕಂಚಿಗೆ ಹೋಗಬೇಕು ಸಮುದ್ರದ ಮರಳನ್ನು ಕಾಶಿಯ ಗಂಗೆಯಲ್ಲಿ ಬಿಡಬೇಕು . ಗಂಗಾನದಿಯ ನೀರನ್ನು ರಾಮೇಶ್ವರ ಲಿಂಗಕ್ಕೆ ಅಭಿಷೇಕ ಮಾಡಬೇಕು ಹೀಗೆ ಈ ಜಂಬೂದ್ವೀಪದ ಅಖಂಡ ಪ್ರವಾಸ ಅಷ್ಟೆ ಅಲ್ಲ ಇತ್ತೀಚಿನ ಚಪ್ಪನ್ ದೇಶಗಳ ಸಂಚಾರ ಎಂಬ ಮಾತು ನಾವೆಲ್ಲರೂ ಕೇಳಿದ್ದೇವೆ.

ಇನ್ನೂ ಒಂದೆರಡು ಸಮುದಾಯಗಳಲ್ಲಿ ತಮ್ಮ ವರ್ಷದ ಸಂಪಾದನೆಯ ಒಂದು ಭಾಗವನ್ನು ಪ್ರವಾಸಮಾಡಿ ಅಲ್ಲಲ್ಲಿ ಕ್ಷೇತ್ರಗಳಿಗೆ ಹೋಗಿ ದಾನಧರ್ಮ ಮಾಡಬೇಕೆಂದೇ ಇದೆ. ಹೀಗಾಗಿ ಪ್ರವಾಸವು ಅಥವಾ ಹಿಂದಿನ ಕಾಲದ ಯಾತ್ರೆಯು ಧರ್ಮದ ಒಂದು ಅಂಗ. ಅದನ್ನು ಶತಶತಮಾನಗಳಿಂದ ಸಂತಮಹಂತರು ಶರಣರು ದಾಸರು ಆಚರಿಸಿದ್ದಾರೆ. ಋಷಿಗಳಿಗೆ ಕಮಂಡಲದ ಅಗತ್ತ್ಯ ಏಕೆ ಬಂತು? ಎಂದು ಸಂಶೋಧನೆ ಮಾಡಿದರೆ ಅವರ ಸತತ ಪ್ರವಾಸವೇ ಅದಕ್ಕೆ ಕಾರಣ ಎಂದು ಗೊತ್ತಾಗುತ್ತದೆ. ಇಂದೂ ಕೂಡ ನೀರಿನಷ್ಟು ಆಧುನೀಕರಣ ಹೊಂದಿದ ಪಂಚಭೂತ ಇನ್ನೊಂದಿಲ್ಲ .

ಕರ್ನಾಟಕದ ಹರಿದಾಸರು ಪ್ರವಾಸ ಕೈಪಿಡಿಯನ್ನು ಬರೆಯಲಿಲ್ಲ ಆದರೆ ಅವರು ಪ್ರವಾಸದ ಫಲಶ್ರುತಿಯನ್ನು ತಮ್ಮ ಕೀರ್ತನೆಯಲ್ಲಿ ಸುಳಾದಿ ಉಗಾಭೋಗಗಳಲ್ಲಿ ಸಂಗ್ರಹಿಸಿದ್ದಾರೆ.ಹೀಗಾಗಿ ಪ್ರವಾಸವು ಧರ್ಮದ ಒಂದು ಅಂಗ. ದಾಸಸಾಹಿತ್ಯದಲ್ಲಿ ಆಸಕ್ತಿಯುಳ್ಳ ಪ್ರವಸೂದ್ಯಮದಲ್ಲಿ ಎಂ.ಬಿ.ಎ ಮಾಡುತ್ತಿರುವ ನನಗೆ ಮನೆಯಲ್ಲಿರುವ ಧಾರ್ಮಿಕ ವಾತಾವರಣ ಈ ಮೂರರ ಪ್ರಭಾವ ಈ ಲೇಖನ ಬರೆಯಬೇಕು ಎಂದು ಪ್ರೇರೇಪಿಸಿತು. ಹರಿದಾಸ ಸಾಹಿತ್ಯದ ಶ್ರೀಕಾರಹಾಡಿದ ಶ್ರೀಪಾದರಾಜರಿಂದ ಹಿಡಿದು ಆಧುನಿಕ ಹರಿದಾಸರವರೆಗೆ ಪ್ರವಾಸ ಮತ್ತು ಧರ್ಮ ಕುರಿತಾದ ಕೆಲವು ಆಲೋಚನೆಗಳನ್ನು ತಮ್ಮ ಮುಂದಿಡಲು ಬಯಸುತ್ತೇನೆ.

ಪ್ರವಾಸ ಎಂಬ ಶಬ್ದವು ಭಾರತೀಯರಿಗೆ ಯಾತ್ರೆ ಎಂದೇ ಪರಿಚಿತ. ಏಕೆಂದರೆ ನಮ್ಮ ಹಿರಿಯರು ಆಸೆತುಹಿಮಾಚಲದ ಯಾತ್ರೆಯ ಪರಿಕಲ್ಪನೆಯನ್ನು ಹೊಂದಿದ್ದರು. ಹಿಂದೆ ಪ್ರವಾಸವೆಂದರೆ ಕೇವಲ ತೀರ್ಥಕ್ಷೇತ್ರಗಳ ದರ್ಶನಕ್ಕೆಂದೇ ಮೀಸಲಾಗಿತ್ತು. ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಅಂದರೆ ಮುಪ್ಪಿನ ವಯಸ್ಸಿನಲ್ಲಿ ಅವರು ಕಾಶಿ ಬದರಿ ಪುರಿ ದ್ವಾರಕ ರಾಮೇಶ್ವರ ಹೀಗೆ ಅನೇಕ ಪುನ್ನ್ಯ ಕ್ಷೇತ್ರಗಳ ದರ್ಶನ ಮಾಡುತ್ತಿದ್ದರು. ಆ ಕ್ಷೇತ್ರಗಳ ದರ್ಶನದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ಅಚಲವಾದ ನಂಬಿಕೆ ಭಾರತೀಯರಲ್ಲಿದೆ. ಆಗ ಪ್ರವಾಸವು ಅಷ್ಟು ಸುಲಭವಾಗಿರಲಿಲ್ಲ ಸಾರಿಗೆ ಸಂಪರ್ಕದ ಕೊರತೆ ಇತ್ತು ಮಾಹಿತಿಯ ಕೊರತೆ ಇತ್ತು ಇನ್ನೂ ಅನೇಕ ರೀತಿಯ ಸಮಸ್ಯೆಗಳಿದ್ದವು. ಆದಾಗ್ಯೂ ಸಹ ಯಾತ್ರೆ ಮಾಡುತ್ತಿದ್ದರು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ ಪ್ರವಾಸವು ಈಗ ವ್ಯಾಪಕವಾಗಿ ಬೆಳೆದಿದೆ ನಿಖರವಾದ ಮಾಹಿತಿ ಸಾರಿಗೆ ಸಂಪರ್ಕ ರೈಲಿನ ವ್ಯವಸ್ಥೆ ಸಮುದ್ರವಿದ್ದಲ್ಲಿ ಕಡಲುಸಾರಿಗೆ ವಿಮಾನಯಾನ ಹೀಗೆ ಅನೇಕ ಬದಲಾವಣೆಗಳಾಗಿವೆ. ಆಧುನಿಕ ತಂತ್ರಜ್ನ್ಯಾನ ಮಾಹಿತಿಯ ವ್ಯಾಪಕ ಸುಧಾರಣೆ ಹಾಗೂ ಅಭಿವೃದ್ಧಿಯಿಂದಾಗಿ ಪ್ರವಾಸವು ಇಂದು ಸುಲಭವೂ ಸುಖಕರವೂ ಸುನಿಶ್ಚಿತವೂ ಆಗಿದೆ. ಇದರ ಮುಂದಿನ ಬದಲಾವಣೆಯೆಂದರೆ ಪ್ರವಾಸವನ್ನು ಒಂದು ನಿರ್ದಿಷ್ಟ ವಿಷಯವನ್ನಾಗಿ ಈಗ ಅಧ್ಯಯನಕ್ಕೆ ನಿಗದಿಪಡಿಸಲಾಗಿದೆ. ಅದೇ ರೀತಿ ಪ್ರವಾಸವು ಇಂದು ಕೇವಲ ಮನೋರಂಜನೆ ಹವ್ಯಾಸ ಮಾಹಿತಿ ಶೇಖರಣೆ ಮಾತ್ರವಲ್ಲದೆ ಒಂದು ಉದ್ದ್ಯಮವಾಗಿ ಬೆಳೆದಿದೆ ಅಪಾರ ಹಣವನ್ನು ಈ ಕ್ಷೇತ್ರದಲ್ಲಿ ತೊಡಗಿಸಲಾಗುತ್ತಿದೆ. ಹೀಗೆ ಈ ಎಲ್ಲ ಅಂಶಗಳಿಂದ ಇಂದು ಪ್ರವಾಸವು ಅತ್ಯಂತ ಪ್ರಮುಖ ವಿಷಯವಾಗಿದೆ.

ದಾಸಸಾಹಿತ್ಯವೂ ಕೂಡ ಪ್ರವಾಸಕ್ಕೆ ಹೊರತಾಗಿಲ್ಲ ಪ್ರವಾಸವು ದಾಸಸಾಹಿತ್ಯದ ಒಂದು ಪ್ರಮುಖವಾದ ಅಂಶವಾಗಿದೆ. ದಾಸಸಾಹಿತ್ಯಕ್ಕೂ ಪ್ರವಾಸಕ್ಕೋ ಅವಿನಾಭಾವ ಸಂಬಂಧವಿದೆ. ದಾಸರು ಸಂಚಾರಿ ಜೀವಿಗಳು ಅವರು ಪ್ರತಿದಿನವೂ ಊರಿಂದೂರಿಗೆ ಪ್ರವಾಸಮಾಡಿ ಧರ್ಮ ಪ್ರಸಾರ ಮಾಡುತ್ತಿದ್ದರು. ಹೀಗಾಗಿ ದಾಸರು ಪ್ರವಾಸದಿಂದ ಪ್ರಸಾರ ಪ್ರಚಾರ ಮಾಡಿದರೆನ್ನಬಹುದು.











ಕಾಮೆಂಟ್‌ಗಳಿಲ್ಲ: