ಸೋಮವಾರ, ಆಗಸ್ಟ್ 25, 2008

ISHTA the endless feeling.......!!!

ಇಷ್ಟ

ಕೈತುತ್ತು ತಿನ್ನಿಸುತ್ತಾ ತನ್ನೊಳಗೆ ಪುಳಕಿತಗೊಳ್ಳುವ ನಮ್ಮಮ್ಮ ಅಂದ್ರೆ ನಂಗಿಷ್ಟ
ಅಂಗೈಯಿಂದ ಎಷ್ಟೇ ಹೊಡೆತ ತಿಂದರೂ ಸಹ ಅಪ್ಪನ ಕಿರುಬೆರಳು ಹಿಡಿದು ತಿರುಗುವದು ನಂಗಿಷ್ಟ
ನಗುವಿನ ಅಲೆಯೊಂದಿಗೆ ಬಾಳಿನ ಸಂತೋಷಕ್ಕೆ ಕಾರಣವಾಗಿರುವ ನನ್ನ ತಂಗಿ ಅಂದ್ರೆ ನಂಗಿಷ್ಟ
ಮುಂಗಾರು ಮಳೆಯಲ್ಲಿ ಮಿಂದು ಪ್ರಕೃತಿಯ ಸೌಂದರ್ಯವನ್ನು ಸವಿಯುವದು ನಂಗಿಷ್ಟ
ಸ್ನೇಹಿತರೊಂದಿಗೆ ಹರಟುತ್ತಾ ಕುಳಿತು ಮನಸ್ಸಿನ ಭರವನ್ನೆಲ್ಲಾ ಕಳೆದುಕೊಳ್ಳುವದು ನಂಗಿಷ್ಟ
ಎದುರಿಗೆ ಹಾದುಹೋಗುತ್ತಿರುವ ಸುಂದರ ಹುಡುಗಿಯ ಧ್ವನಿ ಕೇಳಿ ಅವಳತ್ತ ದೃಷ್ಟಿ ಬೀರುವದು ನಂಗಿಷ್ಟ
ಆ ಹುಡುಗಿಯ ರೂಪ ಸೌಂದರ್ಯದ ಕುರಿತು ಹೇಳುತ್ತಾ ನಗುವುದಂದ್ರೆ ನಂಗಿಷ್ಟ
ಸದಾ ಕಾವ್ಯಲೋಕದಲ್ಲಿ ಮುಳುಗಿ ತೇಲುವಂತೆ ಮಾಡುತ್ತಿರುವ ಈ ಕವಿತೆ ಅಂದ್ರೆ ನಂಗಿಷ್ಟ
ಕೊನೆಗೆ
ಇಷ್ಟು ಇಷ್ಟಗಳಿಗೆ ನನ್ನನ್ನು ದೂರಮಾಡಿದ ಆ ದೇವರನ್ದ್ರೂ ನಂಗಿಷ್ಟ .........!!!!!.


ಸಂಜೀವಕುಮಾರ ಸಿರನೂರಕರ
೨೮-೮-2008

ಕಾಮೆಂಟ್‌ಗಳಿಲ್ಲ: